ಪ್ರತಿಷ್ಠಾನದ ಆಡಳಿತ ಮಂಡಳಿ

ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ

ಶೈಕ್ಷಣಿಕ ಕಾರ್ಯಕ್ರಮ

ಮಹಿಳೆಯರು ಮತ್ತು ಮಕ್ಕಳ ಕಲ್ಯಾಣ

ಆರೋಗ್ಯಸೇವೆ ಕಾರ್ಯಕ್ರಮ

ಶ್ರೀ ಜೆಪಿ ನಾರಾಯಣಸ್ವಾಮಿ ಪ್ರತಿಷ್ಠಾನ (ರಿ)

ಕೀರ್ತಿಶೇಷ ಶ್ರೀಯುತ ಜೆ.ಪಿ. ನಾರಾಯಣಸ್ವಾಮಿಯವರು ಸಮಾಜದ ಒಳಿತಿಗಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ನಿರಂತರವಾಗಿ ನೆಡೆಸಿಕೊಂಡು ಬಂದಿದ್ದರು. ಸಮಾಜದ ಮುಖಂಡರಾಗಿ ಸರ್ವರ ಏಳಿಗೆಗಾಗಿ ಸದಾ ಚಿಂತಿಸುತ್ತ ಸಮಾಜವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದರು . ಅವರ ಅಕಾಲಿಕ ಮರಣ ಸಮಾಜಕ್ಕೆ ಭರಿಸಲಾರದ ನಷ್ಟವನ್ನುಂಟು ಮಾಡಿದೆ. ಜೆ.ಪಿ. ನಾರಾಯಣಸ್ವಾಮಿ ಆಶಯದಂತೆ ಅನೇಕ ಸೌಲಭ್ಯಗಳನ್ನು ಸಮಾಜದ ಜನರಿಗೆ ತಲುಪಿಸುವ ಹಿನ್ನೆಲೆಯಲ್ಲಿ ಹುಟ್ಟುಹಾಕಿದ್ದ ಸಂಸ್ಥೆಯೇ “ಶ್ರೀ ಜೆ.ಪಿ. ನಾರಾಯಣಸ್ವಾಮಿ ಪ್ರತಿಷ್ಠಾನ (ರಿ.)” ಈಗಾಗಲೇ ನೊಂದಣೆಯಾಗಿದ್ದು , ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿರುತ್ತದೆ.

Founder President message

ನಮ್ಮ ಪೂಜ್ಯ ತಂದೆಯವರಾದ ಶ್ರೀ ಜೆ.ಪಿ. ನಾರಾಯಣಸ್ವಾಮಿ (1952-2017) ಅವರು ಬಡತನದಲ್ಲಿ ಹುಟ್ಟಿದ್ದರೂ ಹೋರಾಟ ನಡೆಸಿ ಆಸ್ತಿ, ಅಂತಸ್ತು, ಶ್ರೀಮಂತ ಪರಿಸರ ದಕ್ಕಿಸಿಕೊಂಡ ಸಾಹಸಿ ಉದ್ಯಮಿ. ಯಶಸ್ವಿ ಉದ್ಯಮಿಯಾಗಿದ್ದರೂ ಬಡಬಗ್ಗರ ಸಂಕಷ್ಟಗಳಿಗೆ ಸ್ಪಂದಿಸುವ ಔದರ‍್ಯ ಅವರದಾಗಿತ್ತು. ವ್ಯವಹಾರದಲ್ಲಿ ವಿಶ್ವಾಸದ ಹೃದಯವಂತಿಕೆ, ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡಬೇಕೆಂಬ ತುಡಿತ ಮೊದಲಾದ ಮಾನವೀಯ ಮೌಲ್ಯಗಳನ್ನು ಹೊಂದಿದ್ದ ಅಂತಃಕರಣದ ವ್ಯಕ್ತಿ. ಕರ್ನಾಟಕ ಪ್ರದೇಶ ಅರ‍್ಯ ಈಡಿಗರ ಸಂಘದ ಅಧ್ಯಕ್ಷರಾಗಿ ಜನಾಂಗದ ಮುಖಂಡರನ್ನು ವಿಶ್ವಾಸಕ್ಕೆ ಪಡೆದು ಹಲವಾರು ಶಾಶ್ವತ ಕಾರ್ಯಗಳನ್ನು ರೂಪಿಸಿಕೊಟ್ಟವರು. ಶ್ರೀಸುಧಾ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾಗಿ ಅದನ್ನು ಲಾಭದಾಯಕವಾಗುವಂತೆ ಮುನ್ನಡೆಸಿದವರು. ಅವರು ಆತ್ಮವಿಶ್ವಾಸ, ಪರಿಶ್ರಮ, ಸ್ನೇಹಮಯ ತೇಜಸ್ಸಿನ ಪ್ರತೀಕವಾಗಿದ್ದರು. ತಮ್ಮ ೬೫ನೆಯ ವಯಸ್ಸಿನಲ್ಲಿ ಅಕಾಲಿಕವಾಗಿ ಅಗಲಿದ ಜೆಪಿ ಅವರು ಸಮಾಜದ ಬಗ್ಗೆ ತಾಳಿದ್ದ ನೂರಾರು ಕನಸುಗಳನ್ನು ಸಾಕಾರಗೊಳಿಸಲು ಅವರ ಅಭಿಮಾನಿಗಳಿಂದ ಅಸ್ತಿತ್ವಕ್ಕೆ ಬಂದಿದೆ ಶ್ರೀ ಜೆಪಿ ನಾರಾಯಣಸ್ವಾಮಿ ಪ್ರತಿಷ್ಠಾನ.

ಶ್ರೀ ಜೆ. ಪಿ. ನಾರಾಯಣಸ್ವಾಮಿ ಪ್ರತಿಷ್ಠಾನದ ಆತ್ಮೀಯ ಸಂಚಾಲಕ ಬಂಧುಗಳೇ, 

ದಿನಾಂಕ 03.09.2024 ನೇ ಮಂಗಳವಾರದಂದು ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಜೆ ಪಿ ಸುಧಾಕರ್ ರವರ ನೇತೃತ್ವದಲ್ಲಿ ಕೇಂದ್ರ ಆಡಳಿತ ಮಂಡಳಿ ಸಭೆಯು ಮಧ್ಯಾಹ್ನ 3.30 ಗಂಟೆಗೆ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ  ನಡೆಸಲಾಯಿತು.

ಆಡಳಿತ ಮಂಡಳಿಯ ಸಭೆಯ ನಡಾವಳಿಗಳು ಈ ಕೆಳಕಂಡಂತಿದೆ

1.  ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಜೆ. ಪಿ. ಸುಧಾಕರ್ , ಅಧ್ಯಕ್ಷರು ಡಾ|| ಲಕ್ಷ್ಮೀ ನರಸಯ್ಯ  ಹಾಗೂ ಟ್ರಸ್ಟಿಗಳ ಸಮ್ಮುಖದಲ್ಲಿ ಕೇಂದ್ರ ಆಡಳಿತ ಮಂಡಳಿಯ ಹೊಸ  ಪದಾಧಿಕಾರಿಗಳ ಆಯ್ಕೆಯನ್ನು  ಮಾಡಲಾಯಿತು.
ನೂತನ ಕೇಂದ್ರ ಸಮಿತಿ 2024-2025
ಸಂಸ್ಥಾಪಕ ಅಧ್ಯಕ್ಷರು- ಶ್ರೀ ಜೆ ಪಿ ಸುಧಾಕರ್
ಅಧ್ಯಕ್ಷರು: ಶ್ರೀ ಹೆಚ್ ಎಲ್. ಶಿವಾನಂದ್
ಉಪಾಧ್ಯಕ್ಷರು: ಶ್ರೀ ಮಂಜಪ್ಪ
ಕಾರ್ಯದರ್ಶಿಗಳು: ಶ್ರೀಮತಿ ಕುಸುಮ ಅಜಯ್
ಖಜಾಂಚಿ: ಶ್ರೀ ಮಹೇಶ್ ಕುಮಾರ್
ಟ್ರಸ್ಟಿಗಳು
ಡಾ|| ಲಕ್ಷ್ಮೀ ನರಸಯ್ಯ
ಶ್ರೀ ಪೂರ್ಣೇಶ್

2. ಈಡಿಗ ಸಮುದಾಯದ ಅರ್ಹ ವಿದ್ಯಾರ್ಥಿಗಳಿಗೆ/ ಫಲಾನುಭವಿಗಳಿಗೆ  ವರ್ಷದ ವಿದ್ಯಾರ್ಥಿ ವೇತನ ವಿತರಣೆ ಗಾಗಿ ಅಕ್ಟೋಬರ್ ತಿಂಗಳಿನಲ್ಲಿ ಕೆಲವು ಷರತ್ತುಗಳೊಂದಿಗೆ    ಆನ್‌ಲೈನ್ ಅರ್ಜಿ ಸಲ್ಲಿಸಲು ಕರೆ ನೀಡುವುದು ಎಂದು ತೀರ್ಮಾನಿಸಲಾಗಿದೆ.

3.  ಪ್ರತಿಷ್ಠಾನದ ಕೈಪಿಡಿಯಲ್ಲಿ ತಿಳಿಸಿರುವ ಹಾಗೆ ಎರಡು ವರ್ಷಗಳಿಗೊಮ್ಮೆ ಕೇಂದ್ರ ಆಡಳಿತ ಮಂಡಳಿ,  ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸಂಚಾಲಕ ಸಮಿತಿ ಗಳನ್ನು ಪುನಃ ಪರಿಶೀಲಿಸಿ ಸೇವಾಸಕ್ತಿಯುಳ್ಳ   ಸಂಚಾಲಕರ ಆಯ್ಕೆ ಪ್ರಕ್ರಿಯೆ ನಡೆಸಿ ಹೊಸ ಸಮಿತಿಯನ್ನು ರಚನೆ ಮಾಡುವುದು ಎಂದು ತೀರ್ಮಾನಿಸಲಾಯಿತು. ಸಮಿತಿಯ ಸಂಚಾಲಕರಾಗುವವರು ಯಾವುದೇ ಅಧಿಕಾರಕ್ಕಾಗಿ ನೇಮಕವಾಸ್ತೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಹಾಗೆ ಇರಬಾರದು. ಸೇವೆಗೆ ಸಮಯ ಕೊಟ್ಟು ತನು ಮನ ಧನದಿಂದ ಕಾರ್ಯ ನಿರ್ವಹಿಸುವ ಸಂಚಾಲಕರು ಮಾತ್ರ ಬೇಕು. ಕೇವಲ ವಿದ್ಯಾರ್ಥಿ ವೇತನ ವಿತರಣೆ ಮಾಡುವ ಕಾರ್ಯಕ್ಕೆ ಮಾತ್ರ ಸೀಮಿತವಾಗಬಾರದು. 

4.  JPNP ಸಂಚಾಲಕರ ಸಂಘಟನೆ ಹಾಗೂ ಅವರ ಸದುಪಯೋಗ
* JPNPಯ ವಿಸ್ತರಿಸಿದ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಸಲುವಾಗಿ ಈಡಿಗ ಸಮುದಾಯದ ಅಭಿವೃದ್ಧಿಯಲ್ಲಿ ಆಸಕ್ತರಿರುವ ಸಮುದಾಯದ ವಿವಿಧ ಸಂಘ ಸಂಸ್ಥೆಗಳು ಹಾಲಿ ವೃತ್ತಿಯಲ್ಲಿರುವ ಹಾಗೂ ನಿವೃತ್ತ ನೌಕರರು , ವ್ಯಾಪಾರೋದ್ಯಮಿಗಳು, ಚಿಂತಕರು,  ಸಾಹಿತಿಗಳು,  ಪತ್ರಕರ್ತರು ವಿದ್ಯಾರ್ಥಿ ವೇತನ ಪಡೆದ ಮಾಜಿ ವಿದ್ಯಾರ್ಥಿಗಳು… ಮುಂತಾದವರನ್ನೆಲ್ಲ JPNP ಸಂಚಾಲಕರನ್ನಾಗಿ ಸೇರಿಸಿಕೊಂಡು ಸೇವೆ ಸಲ್ಲಿಸುವುದು ಎಂದು ಯೋಜಿಸಲಾಗಿದೆ.

* JPNPಯ ಯಾವುದೇ ಯೋಜನೆಯ ಸಹಾಯ ಪಡೆದ ಫಲಾನುಭವಿಗಳನ್ನು, ವಿದ್ಯಾರ್ಥಿ ವೇತನ ಪಡೆದ ಮಾಜಿ ಮಾಜಿ ವಿದ್ಯಾರ್ಥಿಗಳು, ವೇತನ ಪಡೆಯುತ್ತಿರುವ ಹಾಲಿ ವಿದ್ಯಾರ್ಥಿಗಳ ಹಾಗೂ ಎಲ್ಲಾ ಸಂಚಾಲಕರ ಪ್ರತ್ಯೇಕ whatsapp ಗ್ರೂಪ್ ರಚಿಸಿ ಅವರ ಸೇವಾಸಕ್ತಿಗೆ ಅನುಗುಣವಾಗಿ ಅವರಿಗೆ ಸೇವಾ ಕಾರ್ಯ ನಿರ್ವಹಿಸಲು ಪ್ರೋತ್ಸಾಹಿಸಿ ಸಮಾಜದ ಜನಾಂಗದ ಉತ್ತಮ ನಾಗರಿಕನನ್ನಾಗಿ ಬೆಳೆಸುವುದು.

5. JPNPಯ ಉದ್ದೇಶ ಕಾರ್ಯಗಳನ್ನು  ಸುಗಮವಾಗಿ ನಿರ್ವಹಿಸುವ  ಸಲುವಾಗಿ  ಸಂಪನ್ಮೂಲ ವ್ಯಕ್ತಿಗಳನ್ನು,  ಸೇವಾಸಕ್ತ ಹಾಗೂ ಅತ್ಯಂತ ಕ್ರಿಯಾಶೀಲರಾಗಿರುವ ನಮ್ಮ ಯೋಜನೆಗಳಿಗೆ ಸಹಕಾರ ನೀಡುವಂತಹ ವಿಶೇಷ ಆಹ್ವಾನಿತರನ್ನು ನೇಮಕ ಮಾಡುವುದೆಂದು ಚರ್ಚಿಸಿ ತೀರ್ಮಾನಿಸಲಾಯಿತು.

6. JPNPಯ ಯಾವುದೇ ಯೋಜನೆಯ ಸಹಾಯ ಪಡೆದವರನ್ನು ಸಂಘಟಿಸಿ ಅವರನ್ನು ಸಮುದಾಯದ ಅಭಿವೃದ್ಧಿಯಲ್ಲಿ ನಿರಂತರವಾಗಿ ಬಳಸಿಕೊಳ್ಳುವ ಸಲುವಾಗಿ ಸೂಕ್ತ ವೇದಿಕೆಯನ್ನು ಕಲ್ಪಿಸುವಂತೆ ತೀರ್ಮಾನಿಸಲಾಗಿದೆ.

7. JPNP ಯ ಕೇಂದ್ರ ಕಚೇರಿಯಲ್ಲಿ ಮಾಹಿತಿ ಸಂಯೋಜಕರ ( data co-ordinator) ಹುದ್ದೆಗೆ ತಾಂತ್ರಿಕ ಮತ್ತು ಕಂಪ್ಯೂಟರ್ ಜ್ಞಾನವಿರುವ ಒಬ್ಬರನ್ನು  ನೇಮಿಸಿಕೊಳ್ಳಲು ತೀರ್ಮಾನಿಸಲಾಗಿದೆ.

8. ಪ್ರತಿಷ್ಠಾನದ ಉದ್ದೇಶಗಳ ಮುಂದಿನ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು.

* ಕರ್ನಾಟಕದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ  ನಮ್ಮ ಜನಾಂಗದವರಿಗೆ ಉದ್ಯೋಗ ಹಾಗೂ ವ್ಯವಹಾರಕ್ಕಾಗಿ ಭಾರತ ಸರ್ಕಾರದ ವತಿಯಿಂದ ಉಚಿತವಾಗಿ ನೀಡುತ್ತಿರುವ 64 ವಿವಿಧ ಬಗೆಯ ಕೌಶಲ್ಯಾಭಿವೃದ್ಧಿ ( skill development) ಯೋಜನೆಗಳ ತರಬೇತಿಗಳನ್ನು ಕೊಡಿಸಿ ಸೂಕ್ತ ಉದ್ಯೋಗ ದೊರೆಯುವ ಹಾಗೆ  ಮಾಡುವುದು.

* ಗ್ರಾಮೀಣ ಭಾಗದಲ್ಲಿ ವಾಸಿಸುವವರಿಗೆ ಅವರ ವಾಸ ಸ್ಥಳದಲ್ಲಿ ಇದ್ದುಕೊಂಡೇ ಮೂಲ ಉದ್ಯೋಗ ( ಕೃಷಿ ಅಥವಾ ಇತರೆ ಉದ್ಯೋಗ) ದೊಂದಿಗೆ ವಿವಿಧ  ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ ಅವರುಗಳ ಆರ್ಥಿಕಾಭಿವೃದ್ಧಿಯನ್ನು ಹೆಚ್ಚಿಸುವುದು.

* ಸ್ವಂತ ಉದ್ಯೋಗ ( self employment) ಮಾಡ ಬಯಸುವ ಅರ್ಹರಿಗೆ ಸೂಕ್ತ ಕೌಶಲ್ಯಾಭಿವೃದ್ಧಿಯಲ್ಲಿ ತರಬೇತಿ ನೀಡಿ ಬ್ಯಾಂಕ್ ಮೂಲಕ ಹಣಕಾಸು ಒದಗಿಸಲು  ಭಾರತ ಸರ್ಕಾರದ ಯೋಜನೆ ಅನ್ವಯ ಸಹಕರಿಸುವುದು.

* ಸರ್ಕಾರ ಕರೆ ಮಾಡಿರುವ ಅಂಗನವಾಡಿ ಶಿಕ್ಷಕಿಯರ ಹುದ್ದೆಗಾಗಿ ಭಾರತ ಸರ್ಕಾರದ ಮಾನ್ಯತೆ ಪಡೆದಿರುವ ಸಂಸ್ಥೆಯಿಂದ ನರ್ಸರಿ ಶಾಲೆ ಹಾಗೂ ಅಂಗನವಾಡಿ ಶಿಕ್ಷಕ ತರಬೇತಿ ಆಸಕ್ತ ಮಹಿಳೆಯರಿಗೆ ಆನ್‌ಲೈನ್ ಮೂಲಕ ನೀಡಿ ಅವರನ್ನು ಪ್ರಮಾಣಿಕೃತ ಶಿಕ್ಷಕಿ  ( certified teacher) ಯಾಗಿ ಆರ್ಥಿಕ ಸಬಲರನ್ನಾಗಿ ಮಾಡುವುದು.

* ಈ ತರಬೇತಿಗಳಿಂದ ಆರ್ಥಿಕ ಸಬಲರಾಗಿ ಸಮಾಜಕ್ಕೂ ತಮ್ಮ ಅಳಿಲು ಸೇವೆ ಮಾಡುವಂತೆ ಸಹಕಾರ ಹಾಗೂ ಪ್ರೋತ್ಸಾಹ ನೀಡುವುದು ನಮ್ಮ ಉದ್ದೇಶ.

ಇನ್ನೂ ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು. ಈ ಮೇಲ್ಕಂಡ ವಿಷಯಗಳ ಬಗ್ಗೆ ಉಸ್ತುವಾರಿ ಟ್ರಸ್ಟಿಗಳು ತಮ್ಮ ಜಿಲ್ಲಾ ಸಂಚಾಲಕರೊಂದಿಗೆ on-line ಸಭೆ ನಡೆಸಿ ಚರ್ಚಿಸಿ ಕಾರ್ಯ ಯೋಜನೆ ಮಾಡಲಾಗುವುದು.
ನಂತರ ಸಂಸ್ಥಾಪಕ ಅಧ್ಯಕ್ಷರು ಶ್ರೀ  ಜೆ  ಪಿ ಸುಧಾಕರ್ ಸರ್ ರವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಮಿತಿ ಹಾಗೂ ಕರ್ನಾಟಕದ ಎಲ್ಲಾ ಸಂಚಾಲಕ ಬಂಧುಗಳ ಒಡಗೂಡಿ ಆನ್‌ಲೈನ್ ಸಭೆಯನ್ನು ಕರೆಯಲಾಗುವುದು.

– ಶ್ರೀ ಜೆ. ಪಿ. ನಾರಾಯಣಸ್ವಾಮಿ ಪ್ರತಿಷ್ಠಾನದ ಕೇಂದ್ರ ಆಡಳಿತ ಮಂಡಳಿ, ಬೆಂಗಳೂರು.

“ಉದ್ಯೋಗ ಅವಕಾಶ: ಡೇಟಾ ಸಂಯೋಜಕರು

ಶ್ರೀ ಜೆ ಪಿ ನಾರಾಯಣಸ್ವಾಮಿ ಪ್ರತಿಷ್ಠಾನ,
ಸದಾಶಿವನಗರ, ಬೆಂಗಳೂರು

ನಾವು ಡೇಟಾ ಸಂಯೋಜಕರ ಸ್ಥಾನಕ್ಕೆ ಅರ್ಹ ಅಭ್ಯರ್ಥಿಯನ್ನು ಹುಡುಕುತ್ತಿದ್ದೇವೆ. ಆದರ್ಶ ಅಭ್ಯರ್ಥಿಯು ಸೂಕ್ತವಾದ ಶೈಕ್ಷಣಿಕ ಅರ್ಹತೆಗಳು ಮತ್ತು ಕಂಪ್ಯೂಟರ್ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ಪರಿಣತಿಯನ್ನು ಹೊಂದಿರಬೇಕು.

ಆಸಕ್ತ ಅರ್ಜಿದಾರರು 080-35429330 ಕ್ಕೆ 10:00 am ಮತ್ತು 4:00 pm ನಡುವೆ, ವೈಯಕ್ತಿಕವಾಗಿ ಅಥವಾ ಫೋನ್ ಕರೆ ಮೂಲಕ ನಮ್ಮನ್ನು ಸಂಪರ್ಕಿಸಬಹುದು.

ಸಮಾಜಕ್ಕಾಗಿ ನಮ್ಮ ಸೇವೆಗಳು

ಕೌಶಲ್ಯಾಭಿವೃದ್ಧಿ

ಶೈಕ್ಷಣಿಕ

ಮಹಿಳೆಯರು ಕಲ್ಯಾಣ

ಆರೋಗ್ಯಸೇವೆ

ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ

ಕೌಶಲ್ಯದಲ್ಲಿ ತರಬೇತಿ ಪಡೆದ ಯುವಕರು

ಮಹಿಳಾ ಕಲ್ಯಾಣಕ್ಕಾಗಿ ಖರ್ಚು ಮಾಡಿದ ಮೊತ್ತ

ಪ್ರತಿ ರೋಗಿಗೆ ಚಿಕಿತ್ಸೆಗಾಗಿ ದಾನ

ನಮ್ಮ ವಿಳಾಸ

ಶ್ರೀ ಜೆಪಿ ನಾರಾಯಣಸ್ವಾಮಿ ಪ್ರತಿಷ್ಠಾನ

#219/11, ಬಳ್ಳಾರಿ ರಸ್ತೆ,
ಸದಾಶಿವನಗರ,
ಬೆಂಗಳೂರು - 560 080
ಇಮೇಲ್ : jpnp.trust@gmail.com
ವೆಬ್ಸೈಟ್ : jpnp.org.in