ನಮ್ಮ ಕಥೆ

ಜೆ.ಪಿ. ನಾರಾಯಣಸ್ವಾಮಿ (1952-2017) ಬಡತನದಲ್ಲಿ ಹುಟ್ಟಿದ್ದರೂ ಹೋರಾಟ ನಡೆಸಿ ಆಸ್ತಿ, ಅಂತಸ್ತು, ಶ್ರೀಮಂತ ಪರಿಸರ ದಕ್ಕಿಸಿಕೊಂಡ ಸಾಹಸಿ ಉದ್ಯಮಿ. ಯಶಸ್ವಿ ಉದ್ಯಮಿಯಾಗಿದ್ದರೂ ಬಡಬಗ್ಗರ ಸಂಕಷ್ಟಗಳಿಗೆ ಸ್ಪಂದಿಸುವ ಔದಾರ್ಯ, ವ್ಯವಹಾರದಲ್ಲಿ ವಿಶ್ವಾಸದ ಹೃದಯವಂತಿಕೆ, ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡಬೇಕೆಂಬ ತುಡಿತ ಮೊದಲಾದ ಮಾನವೀಯ ಮೌಲ್ಯಗಳನ್ನು ಹೊಂದಿದ್ದ ಅಂತಃಕರಣದ ವ್ಯಕ್ತಿ. ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷರಾಗಿ ಜನಾಂಗದ ಮುಖಂಡರನ್ನು ವಿಶ್ವಾಸಕ್ಕೆ ಪಡೆದು ಹಲವಾರು ಶಾಶ್ವತ ಕಾರ್ಯಗಳನ್ನು ರೂಪಿಸಿಕೊಟ್ಟವರು. ಶ್ರೀಸುಧಾ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾಗಿ ಅದನ್ನು ಲಾಭದಾಯಕವಾಗುವಂತೆ ಮುನ್ನಡೆಸಿದವರು. ಅವರು ಆತ್ಮವಿಶ್ವಾಸ, ಪರಿಶ್ರಮ, ಸ್ನೇಹಮಯ ತೇಜಸ್ಸಿನ ಪ್ರತೀಕವಾಗಿದ್ದರು. ತಮ್ಮ 65ನೆಯ ವಯಸ್ಸಿನಲ್ಲಿ ಅಕಾಲಿಕವಾಗಿ ಅಗಲಿದ ಜೆಪಿ ಅವರು ಸಮಾಜದ ಬಗ್ಗೆ ತಾಳಿದ್ದ ನೂರಾರು ಕನಸುಗಳನ್ನು ಸಾಕಾರಗೊಳಿಸಲು ಅವರ ಅಭಿಮಾನಿಗಳಿಂದ ಅಸ್ತಿತ್ವಕ್ಕೆ ಬಂದಿದೆ ಶ್ರೀ ಜೆಪಿ ನಾರಾಯಣಸ್ವಾಮಿ ಪ್ರತಿಷ್ಠಾನ.

ನಮ್ಮ ಪ್ರತಿಷ್ಠಾನ

ಕೀರ್ತಿಶೇಷ ಶ್ರೀಯುತ ಜೆ.ಪಿ. ನಾರಾಯಣಸ್ವಾಮಿಯವರು ಸಮಾಜದ ಒಳಿತಿಗಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ನಿರಂತರವಾಗಿ ನೆಡೆಸಿಕೊಂಡು ಬಂದಿದ್ದರು. ಸಮಾಜದ ಮುಖಂಡರಾಗಿ ಸರ್ವರ ಏಳಿಗೆಗಾಗಿ ಸದಾ ಚಿಂತಿಸುತ್ತ ಸಮಾಜವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದರು . ಅವರ ಅಕಾಲಿಕ ಮರಣ ಸಮಾಜಕ್ಕೆ ಭರಿಸಲಾರದ ನಷ್ಟವನ್ನುಂಟು ಮಾಡಿದೆ. ಜೆ.ಪಿ. ನಾರಾಯಣಸ್ವಾಮಿ ಆಶಯದಂತೆ ಅನೇಕ ಸೌಲಭ್ಯಗಳನ್ನು ಸಮಾಜದ ಜನರಿಗೆ ತಲುಪಿಸುವ ಹಿನ್ನೆಲೆಯಲ್ಲಿ ಹುಟ್ಟುಹಾಕಿದ್ದ ಸಂಸ್ಥೆಯೇ “ಶ್ರೀ ಜೆ.ಪಿ. ನಾರಾಯಣಸ್ವಾಮಿ ಪ್ರತಿಷ್ಠಾನ (ರಿ.)” ಈಗಾಗಲೇ ನೊಂದಣೆಯಾಗಿದ್ದು , ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿರುತ್ತದೆ.

ಈ ಸಂಸ್ಥೆಯ ಮುಖ್ಯ ಉದ್ದೇಶವೆಂದರೆ, ರಾಜ್ಯದಾದ್ಯಂತ ಗ್ರಾಮೀಣ ಭಾಗದಲ್ಲಿ ಕಡುಬಡತನದಿಂದ ವಿದ್ಯಾಭ್ಯಾಸ ಮುಂದುವರೆಸಲು ಸಾಧ್ಯವಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವುಧು. ಅಂಗವಿಕಲರು, ವೃದ್ಧರು, ಅಶಿಕ್ಷಿತರಿಗೆ ಸಹಾಯ ಮಾಡುವುದು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ.ಎ.ಎಸ್./ಕೆ.ಎ.ಎಸ್. ನಂತಹ ಉನ್ನತ ವ್ಯಾಸಂಗಕ್ಕೆ/ತರಬೇತಿಗೆ ನೆರವು ನೀಡುವುದು ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರತಿಭಾವಂತರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಉತ್ತೇಜನ ನೀಡುವುದು. ಮಾತ್ರವಲ್ಲದೆ ಅಗತ್ಯ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರನ್ನು ನೀಡಲು ಆರ್.ಓ. ಪ್ಲಾಂಟ್ಗಳನ್ನು ಅಳವಡಿಸುವುದು ಮುಂತಾದ ಅನೇಕ ಸಮಾಜ ಮುಖಿ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳುವುದಾಗಿದೆ.

ನಮ್ಮ ವಿಳಾಸ

ಶ್ರೀ ಜೆಪಿ ನಾರಾಯಣಸ್ವಾಮಿ ಪ್ರತಿಷ್ಠಾನ

#219/11, ಬಳ್ಳಾರಿ ರಸ್ತೆ,
ಸದಾಶಿವನಗರ,
ಬೆಂಗಳೂರು - 560 080
ಇಮೇಲ್ : jpnp.trust@gmail.com
ವೆಬ್ಸೈಟ್ : jpnp.org.in