ನಮ್ಮ ಪೂಜ್ಯ ತಂದೆಯವರಾದ ಶ್ರೀ ಜೆ.ಪಿ. ನಾರಾಯಣಸ್ವಾಮಿ (೧೯೫೨-೨೦೧೭) ಅವರು ಬಡತನದಲ್ಲಿ ಹುಟ್ಟಿದ್ದರೂ ಹೋರಾಟ ನಡೆಸಿ ಆಸ್ತಿ, ಅಂತಸ್ತು, ಶ್ರೀಮಂತ ಪರಿಸರ ದಕ್ಕಿಸಿಕೊಂಡ ಸಾಹಸಿ ಉದ್ಯಮಿ. ಯಶಸ್ವಿ ಉದ್ಯಮಿಯಾಗಿದ್ದರೂ ಬಡಬಗ್ಗರ ಸಂಕಷ್ಟಗಳಿಗೆ ಸ್ಪಂದಿಸುವ ಔದರ‍್ಯ ಅವರದಾಗಿತ್ತು. ವ್ಯವಹಾರದಲ್ಲಿ ವಿಶ್ವಾಸದ ಹೃದಯವಂತಿಕೆ, ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡಬೇಕೆಂಬ ತುಡಿತ ಮೊದಲಾದ ಮಾನವೀಯ ಮೌಲ್ಯಗಳನ್ನು ಹೊಂದಿದ್ದ ಅಂತಃಕರಣದ ವ್ಯಕ್ತಿ. ಕರ್ನಾಟಕ ಪ್ರದೇಶ ಅರ‍್ಯ ಈಡಿಗರ ಸಂಘದ ಅಧ್ಯಕ್ಷರಾಗಿ ಜನಾಂಗದ ಮುಖಂಡರನ್ನು ವಿಶ್ವಾಸಕ್ಕೆ ಪಡೆದು ಹಲವಾರು ಶಾಶ್ವತ ಕಾರ್ಯಗಳನ್ನು ರೂಪಿಸಿಕೊಟ್ಟವರು. ಶ್ರೀಸುಧಾ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾಗಿ ಅದನ್ನು ಲಾಭದಾಯಕವಾಗುವಂತೆ ಮುನ್ನಡೆಸಿದವರು. ಅವರು ಆತ್ಮವಿಶ್ವಾಸ, ಪರಿಶ್ರಮ, ಸ್ನೇಹಮಯ ತೇಜಸ್ಸಿನ ಪ್ರತೀಕವಾಗಿದ್ದರು. ತಮ್ಮ ೬೫ನೆಯ ವಯಸ್ಸಿನಲ್ಲಿ ಅಕಾಲಿಕವಾಗಿ ಅಗಲಿದ ಜೆಪಿ ಅವರು ಸಮಾಜದ ಬಗ್ಗೆ ತಾಳಿದ್ದ ನೂರಾರು ಕನಸುಗಳನ್ನು ಸಾಕಾರಗೊಳಿಸಲು ಅವರ ಅಭಿಮಾನಿಗಳಿಂದ ಅಸ್ತಿತ್ವಕ್ಕೆ ಬಂದಿದೆ ಶ್ರೀ ಜೆಪಿ ನಾರಾಯಣಸ್ವಾಮಿ ಪ್ರತಿಷ್ಠಾನ.
ಕೀರ್ತಿಶೇಷ ಶ್ರೀ ಜೆಪಿ ನಾರಾಯಣಸ್ವಾಮಿ ಅವರ ಅಭಿಮಾನಿಗಳಲ್ಲಿ ಉದ್ಯಮಿಗಳಿದ್ದಾರೆ. ಅಧಿಕಾರಿಗಳಿದ್ದಾರೆ. ಉನ್ನತ ವರ್ಚಸ್ಸಿನ ಸಾಮಾಜಿಕ ಕಾರ್ಯಕರ್ತರಿದ್ದಾರೆ. ಜಾಗೃತ ಮಹಿಳೆಯರೂ ಇದ್ದಾರೆ. ಇವರೆಲ್ಲ ಸ್ವಯಂಪ್ರೇರಣೆಯಿAದ ಪ್ರತಿಷ್ಠಾನದಲ್ಲಿ ಸೇವೆ ಸಲ್ಲಿಸಲು ಮುಂದೆ ಬಂದಿದ್ದಾರೆ. ಸಮಾಜದ ಬಡವರು, ಅಶಕ್ತರು, ದರ‍್ಬಲರು, ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ, ಆರೋಗ್ಯ, ಶಿಕ್ಷಣ, ಧರ‍್ಮಿಕ ಕಾರ್ಯಕ್ರಮಗಳ ಅನುಷ್ಠಾನ, ಪುನಶ್ಚೇತನ ಇತ್ಯಾದಿ ಸಮಾಜಕ್ಕೆ ಅನುಕೂಲವಾಗುವ ಇತರೆ ಎಲ್ಲಾ ಸೇವಾ ಕಾರ್ಯಗಳನ್ನು ಮಾಡುವ ಉನ್ನತ ಧ್ಯೇಯಗಳನ್ನು ಹೊಂದಿದ್ದಾರೆ.
ಪ್ರತಿಷ್ಠಾನವು ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯವಾಗುವ ಕರ‍್ಯಕ್ರಮಗಳು, ಪ್ರತಿಭಾವಂತ ಬಡ ವಿದ್ಯರ‍್ಥಿಗಳನ್ನು ಉತ್ತೇಜಿಸುವುದು, ನಮ್ಮ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ, ಧರ‍್ಮಿಕ ಅಭಿವೃದ್ಧಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಸಾಂಸ್ಕೃತಿಕ, ಸಾಹಿತ್ಯಿಕ ಚಟುವಟಿಕೆಗಳನ್ನು ನಡೆಸುವುದು, ಉತ್ತೇಜಿಸುವುದು- ಇವೇ ಮೊದಲಾದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಪ್ರತಿಷ್ಠಾನದ ಕಾರ್ಯಯೋಜನೆಗಳ ಅನುಷ್ಠಾನಕ್ಕೆ ರಾಜ್ಯದಾದ್ಯಂತ ಸ್ವಯಂ ಸೇವಕರ ಪಡೆ ಸಂಚಾಲಕರ ರೂಪದಲ್ಲಿ ಸನ್ನದ್ಧವಾಗಿದೆ.