ಪ್ರತಿಷ್ಠಾನದ ಆಡಳಿತ ಮಂಡಳಿ

ಶ್ರೀ ಸುಧಾಕರ್ ಜೆ.ಪಿ.

ಸಂಸ್ಥಾಪಕ – ಅಧ್ಯಕ್ಷರು

ಶ್ರೀ ಜೆ.ಪಿ.ಸುಧಾಕರ್, ಉದ್ಯಮಿಗಳು. ಜೆಪಿ ಉದ್ಯಮ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರು

ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷರಾಗಿದ್ದ ಜೆ.ಪಿ. ನಾರಾಯಣಸ್ವಾಮಿ ಅವರ ಪುತ್ರ ಜೆ.ಪಿ. ಸುಧಾಕರ್ ಅವರು ಜೆ.ಪಿ. ಗ್ರೂಪ್ಸ್ ಉದ್ದಿಮೆಯ ಮಾಲೀಕರು, ಸೋಲೂರಿನ ಈಡಿಗ ಮಹಾಸಂಸ್ಥಾನದ ಕಾರ್ಯನಿರ್ವಾಹಕ ಟ್ರಸ್ಟಿ ಆಗಿಯೂ ಸೇವಾ ನಿರತರು.

ಶ್ರೀಮತಿ ಲತಾ ಸುಧಾಕರ್

ಮಹಾ ಪೋಷಕರು

ಶ್ರೀಮತಿ ಲತಾ ಸುಧಾಕರ್ ಅವರು ಶ್ರೀ ಜೆ.ಪಿ. ಸುಧಾಕರ್ ಅವರ ಪತ್ನಿ. ಅವರು ನಮ್ಮ ಗೌರವಾನ್ವಿತ ಟ್ರಸ್ಟಿಗಳಲ್ಲಿ ಒಬ್ಬರು.

ಡಾ|| ಲಕ್ಷ್ಮೀನರಸಯ್ಯ

ಅಧ್ಯಕ್ಷರು

ಅವರು ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನದ ನಮ್ಮ ಗೌರವಾನ್ವಿತ ಉಪಾಧ್ಯಕ್ಷರು.

ಶ್ರೀ ಶಿವಾನಂದ್ ಎಚ್.ಎಲ್.

ಉಪಾಧ್ಯಕ್ಷರು

ಚಿಕ್ಕಮಗಳೂರು ಜಿಲ್ಲೆ, ನರಸಿಂಹರಾಜಪುರ ತಾಲ್ಲೂಕಿನ ಹೊಡೆಯಾಲ ಗ್ರಾಮದ ಹೆಚ್.ಎಲ್. ಶಿವಾನಂದ ಅವರು ಭೂಮಾಲೀಕರಾದ ಶ್ರೀ ಲಕ್ಷ್ಮಣ ನಾಯಕ್, ಶ್ರೀಮತಿ ಲಕ್ಷ್ಮಮ್ಮ ದಂಪತಿ ಪುತ್ರರು. ಮೈಸೂರಿನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. 1982ರಲ್ಲಿ ಕೆಪಿಎಸ್‍ಸಿ ಮೂಲಕ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಸಹಾಯಕ ನಿರ್ದೇಶಕರಾಗಿ ನೇಮಕಗೊಂಡರು.

ಮುಂದೆ ಉಪನಿರ್ದೇಶಕರಾಗಿ ಸೇವೆ ಸಲ್ಲಿಸಿ, ಜಂಟಿ ನಿರ್ದೇಶಕ ಹುದ್ದೆಯಲ್ಲಿ 2016ರಲ್ಲಿ ನಿವೃತ್ತರಾಗಿದ್ದಾರೆ. ಸೇವಾ ಅವಧಿಯಲ್ಲಿ ದೆಹಲಿಯ ಕರ್ನಾಟಕ ಉದ್ಯೋಗಮಿತ್ರ ಇಲಾಖೆಯಲ್ಲಿ 7 ವರ್ಷ ಸ್ಥಾನಿಕ ನಿರ್ದೇಶಕರಾಗಿ 1998-2005ರವರೆಗೆ ಸೇವೆ ಸಲ್ಲಿಸಿರುತ್ತಾರೆ. ಬೆಂಗಳೂರಿನ ಉದ್ಯೋಗಮಿತ್ರ ವಿಭಾಗದಲ್ಲಿ 2005 ರಿಂದ 2006ರವರೆಗೆ ಕರ್ತವ್ಯ ನಿರ್ವಹಿಸಿದ್ದಾರೆ. ಇಲಾಖೆಯಲ್ಲಿ ಇವರು ಮೈಸೂರು ಮಿನರಲ್ಸ್ ಪ್ರಧಾನ ವ್ಯವಸ್ಥಾಪಕರಾಗಿ, ಕರ್ನಾಟಕ ರಾಜ್ಯ ಕೈಗಾರಿಕೆ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕರಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ.

ಈಡಿಗರ ಶಿಕ್ಷಣ ಹಾಗೂ ಉದ್ಯೋಗದ ವಿಚಾರದಲ್ಲಿ ಇವರು ಮಹತ್ವದ ಕೊಡುಗೆಯಾಗಿರುತ್ತಾರೆ. ಕರ್ನಾಟಕ ರಾಜ್ಯ ಈಡಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದಲ್ಲಿ ಎರಡು ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ರಾಜ್ಯಾದ್ಯಂತ ಜನಾಂಗದ ಸರ್ಕಾರಿ ನೌಕರರನ್ನು ಸಂಘಟಿಸಲು ಶ್ರಮಿಸಿದ್ದಾರೆ. ಪ್ರಸ್ತುತ ಸೋಲೂರಿನ ಆರ್.ಎಲ್. ಜಾಲಪ್ಪ ಅಕಾಡೆಮಿ ಅಧ್ಯಕ್ಷರಾಗಿದ್ದಾರೆ. ಕೋಲಾರದ ಆರ್.ಎಲ್. ಜಾಲಪ್ಪ ವೈದ್ಯಕೀಯ ವಿಶ್ವವಿದ್ಯಾಲಯದ ನಿರ್ದೇಶಕರಾಗಿಯೂ ಸೇವಾನಿರತರು. ಇವರ ಅನುಭವ ಹಾಗೂ ಅರ್ಹತೆ ಆದರಿಸಿ ಹಲವಾರು ಉದ್ದಿಮೆ, ಸಂಸ್ಥೆಗಳ ಸಲಹೆಗಾರರಾಗಿಯೂ ಸ್ಥಾನಮಾನ ಲಭಿಸಿದೆ. ಇವರ ಪತ್ನಿ ಸಂಯುಕ್ತಾ ಅವರು ಬೆಂಗಳೂರಿನ ಪ್ರತಿಷ್ಠಿತ ಅಬಕಾರಿ ಉದ್ಯಮಿ ಕೆ.ಟಿ. ಕೋದಂಡರಾಮ್ ಹಾಗೂ ವೇದವತಿ ದಂಪತಿಯ ಪುತ್ರಿ, ಬಿ.ಎ. ಪದವೀಧರೆ, ಅವಳಿ ಮಕ್ಕಳಾದ ಮಗ, ಮಗಳು ಉನ್ನತ ವಿದ್ಯೆ ಪಡೆದು ಪ್ರತಿಷ್ಠತ ಉದ್ದಿಮೆಗಳಲ್ಲಿ ಉದ್ಯೋಗನಿರತರು. ಇಬ್ಬರೂ ವಿವಾಹಿತರಾಗಿದ್ದಾರೆ. ಈಡಿಗರು ಸಮಗ್ರವಾಗಿ ಅಭಿವೃದ್ಧಿ ಹೊಂದಬೇಕೆಂಬ ಹಿರಿಯರ ಆಶಯದ ಆದರ್ಶದಂತೆ ಹೆಚ್.ಎಲ್. ಶಿವಾನಂದ ಅವರು ವಿಶ್ವಾಸಾರ್ಹರಾಗಿ ತಮ್ಮ ಹೆಚ್ಚು ಸಮಯ ಮೀಸಲಿಟ್ಟು ಶ್ರಮಿಸುತ್ತಿರುವುದು ಅಭಿನಂದನೀಯ. ಪ್ರತಿಷ್ಠಾನದ ಮೂಲಕ ಜೆ.ಪಿ. ನಾರಾಯಣಸ್ವಾಮಿಯವರ ಗುರಿ ಆಶಯ ಈಡೇರಿಸಲು ಸಂಪನ್ಮೂಲ ಶಕ್ತಿ ಇವರಾಗಿದ್ದಾರೆ.

ಶ್ರೀ ಪೂರ್ಣೇಶ್ ಎಂ.ಆರ್.

ಕಾರ್ಯದರ್ಶಿ

ಶ್ರೀ ಎಂ.ಆರ್.ಪೂರ್ಣೇಶ್, ಜೆಪಿ ಉದ್ಯಮ ವ್ಯವಸ್ಥಾಪಕ ನಿರ್ದೇಶಕರ ಆಪ್ತ ಸಹಾಯಕರು,

ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಮಾಜಿ ಅಧ್ಯಕ್ಷರು, ಪ್ರಖ್ಯಾತ ಅಬಕಾರಿ ಗುತ್ತಿಗೆದಾರರಾಗಿದ್ದ ಜೆ.ಪಿ. ನಾರಾಯಣಸ್ವಾಮಿ ಅವರ ಆಪ್ತ ಕಾರ್ಯದರ್ಶಿಯಾಗಿ ಇಪ್ಪತ್ತು ವರ್ಷಗಳಿಂದ ನಿಷ್ಠರಾಗಿ ಕರ್ತವ್ಯ ನಿರ್ವಹಿಸಿ ಮುಂದುವರಿದಿರುವ ಎಂ.ಆರ್. ಪೂರ್ಣೇಶ್ ಅವರು ಚಿಕ್ಕಮಗಳೂರು ಜಿಲ್ಲೆ, ಶೃಂಗೇರಿ ತಾಲ್ಲೂಕಿನ ಮಾಣಿಬೈಲು ಗ್ರಾಮದವರು. ಎಂ.ಎಸ್. ರಾಮಸ್ವಾಮಿ ಹಾಗೂ ಶ್ರೀಮತಿ ಗೀತಾ ಅವರ ಪುತ್ರರಾಗಿ ದಿನಾಂಕ 14-11-1975ರಲ್ಲಿ ಜನಿಸಿದರು.

ಬಿ.ಎ. ಪದವೀಧರರು. ಪದವಿ ಪೂರ್ಣಗೊಂಡ ಬಳಿಕ ಇವರಿಗೆ ಜೆ.ಪಿ. ಗ್ರೂಪ್ಸ್ ಕಂಪನಿಯಲ್ಲಿ ಉದ್ಯೋಗ ದೊರಕಿತು. ಜೆ.ಪಿ. ನಾರಾಯಣಸ್ವಾಮಿಯವರ ಆಶ್ರಯದಲ್ಲಿ ನಿಷ್ಠೆ, ಪ್ರಾಮಾಣಿಕವಾಗಿ ಶ್ರಮಿಸುತ್ತಾ ಬಂದರು. ಅವರ ಪುತ್ರ ಜೆ.ಪಿ. ಸುಧಾಕರ್ ಅವರು ಪೂರ್ಣೇಶ್ ಅವರಿಗೆ ಅದೇ ಸ್ಥಾನದಲ್ಲಿ ಮುಂದುವರಿಸಿದ್ದಾರೆ. ಇದೀಗ ಶ್ರೀ ಜೆ.ಪಿ. ನಾರಾಯಣಸ್ವಾಮಿ ಪ್ರತಿಷ್ಠಾನದಲ್ಲಿ ಇವರಿಗೆ ಖಜಾಂಚಿ ಸ್ಥಾನ ಒದಗಿಸಿಕೊಟ್ಟಿದ್ದಾರೆ.

ಹಿಂದಿನಿಂದಲೂ ಜೆ.ಪಿ. ನಾರಾಯಣಸ್ವಾಮಿ ಅವರು ಈಡಿಗ ಜನಾಂಗದ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರೆ. ಪೂರ್ಣೇಶ್ ಜವಾಬ್ದಾರಿ ಹೊತ್ತು ಅವರ ಆದೇಶ ಪಾಲಕರಾಗಿ ಕೆಲಸ ಕಾರ್ಯ ನಿರ್ವಹಿಸಿಕೊಂಡು ಬಂದವರು. ಬೆಂಗಳೂರಿನ ಸಹ್ಯಾದ್ರಿ ಸಂಘ ಹಾಗೂ ಮಲೆನಾಡು ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕರಾಗಿಯೂ ಸೇವಾನಿರತರು. ಕುಲವೃತ್ತಿಯಲ್ಲೂ ಮುಂದುವರಿದು ಬೆಂಗಳೂರಿನಲ್ಲಿ ಹೋಟೆಲುಗಳ ಮಾಲೀಕರಾಗಿದ್ದಾರೆ. ಸಿಗಂದೂರು ಮನೆತನದ ಜಟ್ಟಪ್ಪ ಅವರ ಪುತ್ರಿ ಅನಿತಾ ಇವರ ಬಾಳಸಂಗಾತಿ. ಈ ದಂಪತಿಗೆ ಶಾಲೆಯಲ್ಲಿ ಕಲಿಯುತ್ತಿರುವ ಶಿಶಿರ್ ಹಾಗೂ ನಿಷ್ಕರ್ ಇಬ್ಬರು ಗಂಡು ಮಕ್ಕಳಿದ್ದಾರೆ. ತಮ್ಮ ಉದ್ಯೋಗದಾತ ಯಜಮಾನರಾದ ಜೆ.ಪಿ. ನಾರಾಯಣಸ್ವಾಮಿ ಅವರ ಸ್ಮರಣಾರ್ಥ ಜನಾಂಗದ ಸೇವೆಯಲ್ಲಿ ನಿರತರಾಗುವ ಗುರಿ ಇವರದ್ದಾಗಿದೆ.

ಶ್ರೀಮತಿ ಕುಸುಮಾ ಅಜಯ್

ಖಜಾಂಚಿ

M.A. B.Ed. ಪದವೀಧರೆಯಾಗಿ ಮದರ್ಸ್‌ ಟಚ್‌ ಸ್ಕೂಲ್‌ ನಲ್ಲಿ ಮುಖ್ಯ ಶಿಕ್ಷಕಿಯಾಗಿ 19 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಮಾಂಟೆಸರಿ ಶಿಕ್ಷಕರ ತರಬೇತಿ ಗಳನ್ನು ನ್ಯೂಟನ್‌ ಎಕ್ಸಲೆನ್ಸ್‌ ಅಕಾಡಮಿ ಯಲ್ಲಿ ಸಿ ಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಈಡಿಗರ ಸಮುದಾಯದಲ್ಲಿ ಬಹಳ ಚಿರಪರಿಚಿತರು .ಲೇಖಕರು. ಶಿಕ್ಷಕರು ..ಭಾಷಣಾಕಾರರು ..ಈಡಿಗರ ಸಮುದಾಯದ ಸಾಮೂಹಿಕ ವಿವಾಹಗಳನ್ನು ವ್ಯವಸ್ಥೆಯ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸಿದ್ದಾರೆ ಈಡಿಗ ಮಹಿಳಾ ಸಂಘ ದಲ್ಲಿ ಕಾರ್ಯ ದರ್ಶಿಯಾಗಿದ್ದಾರೆ .ರೋಡರಿ ಇನ್ದರ್‌ ವೀಲ್‌ ನಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ -ಭಾರತೀಯ ಮಹಿಳಾ ಸಮ್ಮೇಳನದಲ್ಲಿ ವಿಶೇಷ ಆಹ್ವಾನಿತರಾಗಿದ್ದರು. ಬಹಳವಾಗಿ ತಮ್ಮನ್ನು ತಾವು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಶ್ರೀ ಮಂಜಪ್ಪ ಜಿ.

ಟ್ರಸ್ಟಿ

ಶ್ರೀ ಜಿ.ಮಂಜಪ್ಪ, ಸರ್ಕಾರಿ ಅಧಿಕಾರಿಗಳು, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ, ಮುಖ್ಯ ಮಹಾಪ್ರಬಂಧಕ (ಲೆಕ್ಕಪತ್ರ)

ಬೆಸ್ಕಾಂ ಮುಖ್ಯ ಪ್ರಧಾನ ವ್ಯವಸ್ಥಾಪಕರಾಗಿರುವ ಜಿ. ಮಂಜಪ್ಪ ಶಿವಮೊಗ್ಗ ಜಿಲ್ಲೆ, ಸಾಗರ ತಾಲ್ಲೂಕಿನ ಐಗಿನಬೈಲು ಗ್ರಾಮದ ಕೃಷಿಕ ಕುಟುಂಬದಿಂದ ಬೆಳೆದು ಬಂದವರು. ಎಂ.ಕಾಂ., ಎಂಬಿಎ ಪದವೀಧರರಾಗಿದ್ದು 1985ರಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಸಹಾಯಕ ಲೆಕ್ಕಾಧಿಕಾರಿಯಾಗಿ ನೇಮಕಗೊಂಡು ಇದೀಗ ಆಂತರಿಕ ಲೆಕ್ಕಪರಿಶೋಧನೆ ಸಿಜಿಎಂ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸಾಗರ ತಾಲ್ಲೂಕು ಆರ್ಯ ಈಡಿಗರ ಸಂಘದ ಹಾಸ್ಟೆಲ್‍ನಲ್ಲಿ ಪದವಿವರೆಗೆ, ದಾವಣಗೆರೆ ಜಿಲ್ಲಾ ಈಡಿಗರ ಹಾಸ್ಟೆಲ್‍ನಲ್ಲಿ ಎಂಕಾಂ ಪದವಿ ಶಿಕ್ಷಣ ಹಂತದಲ್ಲಿ ಆಶ್ರಯ ಪಡೆದಿದ್ದರು. ಸರ್ಕಾರದ ಉನ್ನತಾಧಿಕಾರಿ ಆಗಿದ್ದರೂ ಜನಾಂಗದ ಅಭಿವೃದ್ಧಿಗಾಗಿ ಮುಖಂಡರೊಟ್ಟಿಗೆ ಶ್ರಮಿಸುತ್ತಾ ಬರುತ್ತಿದ್ದಾರೆ. ಈಡಿಗ ನೌಕರರ ಸಂಘದ ಕಾರ್ಯ ಚಟುವಟಿಕೆಯಲ್ಲೂ ತೊಡಗಿದ್ದಾರೆ.

ಶ್ರೀ ಮಹೇಶ್ ಕುಮಾರ್

ಟ್ರಸ್ಟಿ

ಶ್ರೀ ಎಸ್. ಮಹೇಶ್ ಕುಮಾರ್, ಸರ್ಕಾರಿ ಅಧಿಕಾರಿಗಳು

ಮೂಲತಃ ಎಂಜಿನಿಯರಿಂಗ್ ಪದವೀಧರರಾಗಿದ್ದು, ಸಾರ್ವಜನಿಕ ಸೇವೆ ಗುರಿಯಲ್ಲಿ ಪೊಲೀಸ್ ಇಲಾಖೆ ಆಯ್ಕೆ ಮಾಡಿಕೊಂಡಿರುವ ಎಸ್. ಮಹೇಶ್‍ಕುಮಾರ್ ಕರ್ತವ್ಯನಿಷ್ಠೆ, ದಕ್ಷತೆಗೆ ಹೆಸರಾದವರು. ಮೈಸೂರು ಜಿಲ್ಲೆ, ಹುಣಸೂರು ಪಟ್ಟಣದ ಅಬಕಾರಿ ಉದ್ಯಮಿ ಶಿವಪ್ಪ ಅವರ ಪುತ್ರರಿವರು. ಕುಶಾಲನಗರದಲ್ಲಿ ಡಿಪ್ಲೋಮಾ ಶಿಕ್ಷಣ ಪಡೆದು ನಂತರ ಮಂಡ್ಯ ನಗರದ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಟೋಮೊಬೈಲ್ ಎಂಜಿನಿಯರಿಂಗ್ ಪದವಿ ಗಳಿಸಿದರು. ಈ ಅವಧಿಯ 1991-95ರಲ್ಲಿ ಮಂಡ್ಯ ಜಿಲ್ಲಾ ಈಡಿಗರ ಸಂಘದ ಹಾಸ್ಟೆಲಿನಲ್ಲಿ ಆಶ್ರಯ ಪಡೆದಿದ್ದರು.

ಜನಸಾಮಾನ್ಯರ ನಡುವೆ ಬೆರೆತು ಸೇವೆ ಸಲ್ಲಿಸುವ ಮಹತ್ವದ ಗುರಿ ಇವರದಾಗಿತ್ತು. ಅದೇ ಸ್ಪೂರ್ತಿಯಲ್ಲಿ 1998ರಲ್ಲಿ ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಹುದ್ದೆಗೆ ಆಯ್ಕೆಯಾದರು. ಸಿರಾದ ಪಟ್ಟನಾಯಕನಹಳ್ಳಿ, ಕೊರಟಗೆರೆ, ಗೌರಿಬಿದನೂರು, ತುಮಕೂರಿನ ತಿಲಕ್‍ನಗರ ಠಾಣೆಗಳಲ್ಲಿ ಸಬ್ ಇನ್ಸ್‍ಪೆಕ್ಟರ್ ಆಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದರು. 2007ರಲ್ಲಿ ಇನ್ಸ್‍ಪೆಕ್ಟರ್ ಹುದ್ದೆಗೆ ಬಡ್ತಿ ದೊರಕಿತು.

ಸರ್ಕಲ್ ಇನ್ಸ್‍ಪೆಕ್ಟರ್ ಆಗಿ ಮಂಡ್ಯ ಬೆಸ್ಕಾಂ, ಕೊರಟಗೆರೆ, ಮೈಸೂರು ಗ್ರಾಮಾಂತರ, ಸಿರಾ ಗ್ರಾಮಾಂತರ, ಚಿಕ್ಕಬಳ್ಳಾಪುರ, ದೇವನಹಳ್ಳಿ ತಾಲ್ಲೂಕಿನ ವಿಜಯಪುರ, ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನನಿಲ್ದಾಣ ಸಂಚಾರಿ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ. ಇವರ ಕಾರ್ಯದಕ್ಷತೆ ಗುರುತಿಸಿರುವ ಸರ್ಕಾರ 2012ರಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರದಾನ ಮಾಡಿ ಸನ್ಮಾನಿಸಿದೆ. ಪ್ರಸ್ತುತ ಮಂಡ್ಯದಲ್ಲಿ ಡಿ ವೈ ಎಸ್ ಪಿ ಆಗಿದ್ದಾರೆ .

ಸಂಘದ ಅಧ್ಯಕ್ಷರಾಗಿದ್ದ ಜೆ.ಪಿ. ನಾರಾಯಣಸ್ವಾಮಿ ಅವರ ಆಹ್ವಾನದ ಮೇರೆಗೆ ಜನಾಂಗದ ಸೇವೆಯಲ್ಲಿ ತೊಡಗಿಸಿಕೊಂಡರು. ಇವರು ಸೇವೆಯಲ್ಲಿದ್ದ ಕಡೆಗಳಲ್ಲಿ ಈಡಿಗರ ಸಂಘಟನೆಯಲ್ಲಿ ಶ್ರಮಿಸುತ್ತಾ ಬಂದವರು. ತುಮಕೂರು ಜಿಲ್ಲೆಯಲ್ಲಿ ಲಕ್ಷ್ಮೀನರಸಯ್ಯ ಅವರ ಜೊತೆಗೂಡಿ ಹಲವಾರು ಮಹತ್ವದ ಕಾರ್ಯದಲ್ಲಿ ಶ್ರಮಿಸಿದ್ದಾರೆ. ಕೊರಟಗೆರೆ, ಶಿರಾದಲ್ಲಿ ಈಡಿಗರ ಬೃಹತ್ ಸಮಾವೇಶ ಯಶಸ್ವಿಗೊಳಿಸಿದುದು ದಾಖಲೆ ಎನಿಸಿದೆ. ಈಡಿಗ ನೌಕರರ, ಮಹಿಳೆಯರ ಸಂಘಗಳ ಬಲವರ್ಧನೆಯಲ್ಲೂ ಸ್ವಪ್ರೇರಣೆಯಿಂದ ತೊಡಗಿಸಿಕೊಂಡು ಬರುತ್ತಿರುವುದು ಅಭಿನಂದನೀಯ.

ನಮ್ಮ ವಿಳಾಸ

ಶ್ರೀ ಜೆಪಿ ನಾರಾಯಣಸ್ವಾಮಿ ಪ್ರತಿಷ್ಠಾನ

#219/11, ಬಳ್ಳಾರಿ ರಸ್ತೆ,
ಸದಾಶಿವನಗರ,
ಬೆಂಗಳೂರು - 560 080
ಇಮೇಲ್ : jpnp.trust@gmail.com
ವೆಬ್ಸೈಟ್ : jpnp.org.in